ಎ.ಪಿ.ಜೆ ಅಬ್ದುಲ್ ಕಲಾಂ - ಟರ್ನಿಂಗ್ ಪಾಯಿಂಟ್ಸ
ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ನನ್ನ ಒಂದು ಚಿಕ್ಕ ಸೇವೆ!
ಎ.ಪಿ.ಜೆ ಅಬ್ದುಲ್ ಕಲಾಂ -
ಟರ್ನಿಂಗ್ ಪಾಯಿಂಟ್ಸ
ಈ ವಿದಾಯದ ಭೇಟಿಗಳು ಸ್ನೇಹಿತರೊಂದಿಗೆ ಮಾತುಕತೆ ನಾನು ರಾಷ್ಟ್ರಪತಿ ಭವನದಿಂದ ನಿರ್ಗಮ ವಹಿಸುವಾಗ ಒಯ್ಯುತ್ತೇನೆ ಎಂದು ಜಗಜ್ಜಾಹೀರಾತು ಆಗಿರುವ ಎರಡು ಸೂಟ್ ಕೇಸ್ ಗಳನ್ನು ತುಂಬಿಸುವಾಗ ಈ ಎಲ್ಲ ಸಂದರ್ಭಗಳು ವಾತಾವರಣದಲ್ಲಿ ಸುತ್ತುತ್ತಿದ್ದ ಒಂದು ಆಲೋಚನೆ ಎಂದರೆ .ನಾನು ಮುಂದೆ ಏನು ಮಾಡುತ್ತಾನೆ ಎಂಬುದೇ ಆಗಿತ್ತು .ನನ್ನನ್ನು ಭೇಟಿಯಾದ ಅಥವಾ ಮಾತನಾಡಿದ ಪ್ರತಿಯೊಬ್ಬರ ಮನಸ್ಸಿನಲ್ಲೂ ಇದ್ದ ಪ್ರಶ್ನೆಯೇ ಅದೇ ಆಗಿತ್ತು ಎನ್ನಬಹುದು .
ನಾನು ಮುಂದೆ ಏನು ಮಾಡಲಿದ್ದೇನೆ ನಾನೇನಾದರೂ ಆಲೋಚನೆ ಮಾಡಿದ್ದೀನಾ ಅಧ್ಯಾಪನಕ್ಕೆ ವಾಪಸ್ಸು ಹೋಗುವೆನೆೇ. ಸಕ್ರಿಯ ಜೀವನದಿಂದ ನಿವೃತ್ತಿ ಪಡೆಯುವೆನೆೇ. ಈ ವಿಚಾರದ ಬಗ್ಗೆ ಯಾರಿಗೂ ತಿಳಿದಿರಲಿಲ್ಲ .ಕಳೆದ ಐದು ವರ್ಷಗಳ ರಾಷ್ಟ್ರಪತಿ ಭವನದಲ್ಲಿ ನನ್ನ ಜೀವನ ನನ್ನ ಮನದಲ್ಲಿ ಹಸಿರಾಗಿತ್ತು ಸದಾ ಸ್ವಾಗತಿಸುತ್ತಿರುವ ಮೊಘಲ್ ಉದ್ಯಾನದ ಹೂವುಗಳು ಅಲ್ಲಿ ತಮ್ಮ ಕೊನೆಯ ಕಚೇರಿಯನ್ನು ಕೊಟ್ಟ ಉಸ್ತಾದ್ ಬಿಸ್ಮಿಲ್ಲಾ ಖಾನರು ಹಾಗೂ ಅಲ್ಲಿ ಗಾನಸುಧೆ ಹರಿಸಿದ ಇತರ ಹಲವಾರು ಕಲಾವಿದರು ಔಷಧ ಸಸ್ಯಗಳ ತೋಟದಿಂದ ಬರುತ್ತಿರುವ ಸುಗಂಧ ಪೂರಿತ ಗಾಳಿ ಕುಣಿಯುತ್ತಿರುವ ನವಿಲುಗಳು ನೆತ್ತಿಸುಡುವ ಬಿಸಿಲಲ್ಲೂ ಮರಗಟ್ಟಿಸುವ ಚಳಿಯಲ್ಲೂ ಜಾಗೃತ ಸ್ಥಿತಿಯಲ್ಲಿ ನಿಂತಿರುವ ಕಾವಲುಗಾರರು ಇವೆಲ್ಲವೂ ನನ್ನ ದೈನಂದಿನ ಜೀವನದ ಭಾಗಗಳೇ ಆಗಿದ್ದವು ಕಳೆದ ಐದು ವರ್ಷಗಳ ಈ ಅನುಭವಗಳ ಶ್ರೀಮಂತಿಕೆಯೂ ವರ್ಣಿಸಲು ಸಾಧ್ಯವಿಲ್ಲ !
ವಿವಿಧ ಜನ ವಿಭಾಗಗಳ ವಿವಿಧ ಸಾಮಾಜಿಕ ಕ್ಷೇತ್ರಗಳ ಜನರು ದೇಶದ ಅಭಿವೃದ್ಧಿಯ ಕುರಿತಾದ ತಮ್ಮ ಆಲೋಚನೆಗಳನ್ನು ನನ್ನ ಮುಂದೆ ಬಿಚ್ಚಿಟ್ಟಿದ್ದರು .ವೈದ್ಯಕೀಯ ಸಮುದಾಯದೊಂದಿಗಿನ ನನ್ನ ಹೂಕ್ಕು ಬಳಕೆಯಲ್ಲಿ ವ್ಯಾಪಕ ವಿಷಯಗಳು ಚರ್ಚೆಯಾದವು ಅದರಲ್ಲಿ ಮುಖ್ಯವಾಗಿ ಪ್ರತಿಯೊಬ್ಬ ಗ್ರಾಮೀಣ ಪ್ರಜೆಗೂ ಕೈಗೆಟುಕುವ ಖರ್ಚಿನಲ್ಲಿ ವೈದ್ಯಕೀಯ ಸೇವೆ ಸಿಗುವಂತೆ ಮಾಡುವುದು ಹೇಗೆ ಸಂಶೋಧನೆಗೆ ಪ್ರೋತ್ಸಾಹ ವಿಕಲಚೇತನರ ಜೀವನದ ಸೌಕರ್ಯಗಳನ್ನು ಹೆಚ್ಚಿಸುವುದು ವೃದ್ಧರ ಬಗೆಗೆ ಕಾಳಜಿ ಹಾಗೂ ರೋಗಗಳನ್ನು ದೂರವಿಡಲು ಸಾಕಾರವಾಗುವ ಜೀವನದ ರೀತಿ ನೀತಿಗಳನ್ನು ರೂಢಿಸುವ ಸಂದೇಶವನ್ನು ಹರಡುವುದು ಹೇಗೆ ಎಂಬ ಮುಖ್ಯವಾದವು ದೇಶದಲ್ಲಿ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಧಿಕ ಗುಣಮಟ್ಟದ ವೈದ್ಯಕೀಯ ಸೇವಾ ಕೇಂದ್ರಗಳನ್ನು ತೆರೆಯುವ ಪ್ರಸ್ತಾಪಗಳನ್ನು ದಾದಿಯರು ಅವರು ದೇಶ ದೊಳಗಿನವರ ಆಗಿರಲಿ ವಿದೇಶಗಳಲ್ಲಿ ನೆಲೆಸಿದರೆ ಆಗಿರಲಿ ನನ್ನ ಮುಂದೆ ಇರಿಸಿದರು .
ರೈತರೊಂದಿಗೆ ಮುಖ್ಯವಾಗಿ ಸಂಕಷ್ಟದಲ್ಲಿರುವ ಹತ್ತಿ ಬೆಳೆಗಾರರೊಂದಿಗೆ ನನ್ನ ಸಂವಾದದಲ್ಲಿ ಅವರ ಸಮಸ್ಯೆ ಹಾಗೂ ಸವಾಲುಗಳನ್ನು ಅರ್ಥ ಮಾಡಿಕೊಳ್ಳುವುದು ನನಗೆ ಸಾಧ್ಯವಾಯಿತು ಇದರಿಂದ ನನ್ನ ಆಲೋಚನೆಗಳನ್ನು ರೂಪಿಸಿ ಅವುಗಳನ್ನು ಕೃಷಿ ವಿಜ್ಞಾನಿಗಳಿಗೆ ತಲುಪಿಸಿ ಅವರಿಂದ ಪರಿಹಾರವನ್ನು ಪಡೆಯುವುದಕ್ಕೆ ಅನುಕೂಲವಾಯಿತು .
ಪೊಲೀಸರು ನನ್ನನ್ನು ಭೇಟಿಯಾಗಿ ಪೊಲೀಸ್ ಸುಧಾರಣೆಯ ಬಗ್ಗೆ ಚರ್ಚಿಸಿದರು ಪೊಲೀಸ್ ಠಾಣೆಯ ಮೂಲಕ ಸೌಕರ್ಯಗಳ ಅಭಿವೃದ್ಧಿ ಹಾಗೂ ವಿಸ್ತರಣೆ ಪೊಲೀಸರ ಕಾರ್ಯನಿರ್ವಹಣೆಯಲ್ಲಿ ಮಾಹಿತಿ ತಂತ್ರಜ್ಞಾನವನ್ನು ಅಳವಡಿಸುವುದು ಈ ಕುರಿತು ನನ್ನ ಆಲೋಚನೆಗಳನ್ನು ಪೊಲೀಸ್ ಸುಧಾರಣೆಯ ವೇದಿಕೆಗಳಲ್ಲಿ ಮಂಡಿಸುವುದಕ್ಕೆ ಇದರಿಂದ ನನಗೆ ಸಾಧ್ಯವಾಯಿತು.
2 ಅಣ್ಣಾ ವಿಶ್ವವಿದ್ಯಾಲಯದಲ್ಲಿ ನನ್ನ ಒಂಬತ್ತನೇ ಉಪನ್ಯಾಸ
2001ರಿಂದ ನಾನು ಕೆಲಸ ಮಾಡುತ್ತಿದ್ದ ಅಣ್ಣ ವಿಶ್ವವಿದ್ಯಾಲಯದ ಸುಂದರವಾದ ಪರಿಸರದಲ್ಲಿ 2002 ಜೂನ್ ತಿಂಗಳ ಹತ್ತನೇ ದಿನಾಂಕದ ಮುಂಜಾವು ಇತರ ಎಲ್ಲಾ ಮುಂಜಾವುಗಳಂತೆಯೇ ಇದ್ದಿತು. ಆ ವಿಶಾಲವೂ ಶಾಂತೂ ಆಗಿದ್ದ ಸಂಕೀರ್ಣದಲ್ಲಿ ನಾನು ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂಶೋಧನೆಯ ಸಂಬಂಧವಾಗಿ ದೀರ್ಘವಾಗಿ ಚರ್ಚಿಸುತ್ತಿದ್ದೆ .
ನನ್ನ ತರಗತಿಯ ಅಧಿಕೃತ ವಿದ್ಯಾರ್ಥಿ ಸಂಖ್ಯೆ ಅರುವತ್ತು ಆದರೆ ಯಾವುದೇ ಒಂದು ಉಪನ್ಯಾಸವನ್ನು ತೆಗೆದುಕೊಂಡರೂ ಅಲ್ಲಿ ಹಾಜರಾಗುತ್ತಿದ್ದರು ಸಂಖ್ಯೆ ಮುನ್ನೂರ ಐವತ್ತು ಇರುತ್ತಿತ್ತು !!.
ಹೀಗೆ ಬರುವವರನ್ನು ತಡೆಯುವ ಯಾವ ಮಾರ್ಗವೂ ಇರಲಿಲ್ಲ ಯುವ ಜನಾಂಗದ ಆಶೋತ್ತರಗಳನ್ನು ತಿಳಿದುಕೊಳ್ಳುವುದು ನನ್ನ ಅನೇಕ ರಾಷ್ಟ್ರೀಯ ಯೋಜನೆಗಳ ಬಗ್ಗೆ ತಿಳಿದುಕೊಳ್ಳುವುದು ಅವರಿಗೆ ಆಸಕ್ತಿಗಳು .ನಾನೇ ರೂಪಿಸಿದ ಹತ್ತು ವಿಷಯ ಉಪನ್ಯಾಸಗಳ ಒಂದು ಮಾಲಿಕೆಯಲ್ಲಿ ಸಾಮಾಜಿಕ ಬದಲಾವಣೆಗೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮಾರ್ಗೋಪಾಯಗಳನ್ನು ಹೇಳಿಕೊಡುವುದು ನನ್ನ ಉದ್ದೇಶವಾಗಿತ್ತು .
ರಾಷ್ಟ್ರೀಯ ಯೋಜನೆ ಎಂಬುದರ ಮೂಲಕ ನಾನು ಈ ಕೆಳಗಿನ ಹಲವು ವಿಚಾರಗಳನ್ನು ಹೇಳುತ್ತಿದ್ದೆ
1. ಬಾಹ್ಯಾಕಾಶ ವಾಹನ ಉಡಾವಣೆ ಯಂತ್ರದ ಬಗ್ಗೆ
2. SSV3 IGMDP (integrated guided missile development programme )
3. 1998ರ ಪರಮಾಣು ಪರೀಕ್ಷೆಗಳು ಹಾಗೂ ITFAC ( technology information forecasting and assessment council ) ..etc
ಮುಖ್ಯವಾಗಿ ಅದು ನನ್ನ ಒಂಬತ್ತನೇ ಉಪನ್ಯಾಸ ಹೆಸರು ಕನಸಿನಿಂದ ಕನಸಿಗೆ (ಮಿಷನ್ ಟು ಮಿಷನ್ ) ಅದರಲ್ಲಿ ಅನೇಕ ಅಧ್ಯಾಯದ ಅಂಶಗಳಿದ್ದವು ಅದನ್ನು ನಾನು ಮುಗಿಸಿದಾಗ ನನ್ನ ವಿದ್ಯಾರ್ಥಿಗಳ ಜೊತೆ ಪ್ರಶ್ನೆಗಳು ಎದುರಾದವು ನಿಗದಿ ತಾಸಿನಲ್ಲಿ ಮುಗಿಸಿ ಮುಂದೆ ಹೊರಟೆ.
ನಾನು ಕೊಠಡಿಗೆ ಹೋಗುತ್ತಿರುವಾಗ ಅಣ್ಣಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊಫೆಸರ್ ಎ ಕಲಾನಿಧಿ ಅವರು ನನಗೆ ಜೊತೆಯಾದರು . ಅವರು ನನ್ನಲ್ಲಿ ಹೇಳಿದರು ನಿಮ್ಮ ಕಚೇರಿಗೆ ಇವತ್ತು ತುಂಬಾ ದೂರವಾಣಿ ಕರೆಗಳು ಬಂದವು . ಯಾರೋ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನ ಮಾಡುತ್ತಿರುವಂತೆ ಕಾಣುತ್ತಿದೆ ಎಂದರು .
ನಾನು ಕೊಠಡಿಯನ್ನು ಹೋಗುತ್ತಲೇ ಅಲ್ಲಿಯೂ ದೂರವಾಣಿಯು ಬಡಿದುಕೊಳ್ಳುತ್ತಿತ್ತು ನಾನು ರಿಸೀವರ್ ಎತ್ತಿಕೊಂಡಾಗ ಆ ಕಡೆಯಿಂದ ಧ್ವನಿಯೋ ......
"ಪ್ರಧಾನ ಮಂತ್ರಿಗಳು ನಿಮ್ಮೊಡನೆ ಮಾತನಾಡಲು ಇಚ್ಛಿಸುತ್ತಿದ್ದಾರೆ ಎಂದಿತು . ನಾನು ಪ್ರಧಾನ ಮಂತ್ರಿಗಳ ಧ್ವನಿಗಾಗಿ ರಿಸೀವರ್ ಹಿಡಿದು ಕಾಯುತ್ತಿರುವ ಬೇಕಾದರೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ನನ್ನ ಸೆಲ್ಫೋನ್ಗೆ ಕರೆ ಮಾಡಿದರು ."ಪ್ರಧಾನ ಮಂತ್ರಿಗಳಿಂದ ನಿಮಗೆ ಒಂದು ಮಹತ್ವವಾದ ಕರೆ ಬರಲಿದೆ ದಯವಿಟ್ಟು ಇಲ್ಲ ಅನ್ನಬೇಡಿ ಎಂದು ನಾಯ್ಡು ಅವರು ಹೇಳಿದರು .
😊 ನಾನು ನಾಯ್ಡು ಜೊತೆ ಮಾತನಾಡುತ್ತಿರಬೇಕಾದರೆ ಪ್ರಧಾನಿ ವಾಜಪೇಯಿ ಅವರು ಲೈನಿನಲ್ಲಿ ಬಂದರು . ಅವರು ಕಲಾಂ , ಹೇಗಿದೆ ನಿಮ್ಮ ಶೈಕ್ಷಣಿಕ ಜೀವನ ? ಎಂದು ಕೇಳಿದರು
"ಅತ್ಯುತ್ತಮವಾಗಿದೆ ನಾನೆಂದೆ" .
ವಾಜಪೇಯಿ ಅವರು ಮುಂದುವರೆಸುತ್ತಾ ಅನ್ನೋದು ಅದು ಬಹಳ ಮಹತ್ವದ ಸುದ್ದಿ ಇದೆ ನಮ್ಮ ಎಲ್ಲ ಭಾಗಿದಾರರ ಪಕ್ಷಗಳು ಭಾಗವಹಿಸಿದ ಸಭೆಯಿಂದ ಈಗಷ್ಟೇ ನಾನು ಬಂದೆ ಈ ದೇಶಕ್ಕೆ ರಾಷ್ಟ್ರಪತಿಯಾಗಿ ನಿಮ್ಮ ಸೇವೆ ಅಗತ್ಯವಿದೆ ಎಂದು ನಾವು ಸರ್ವ ಇದನ್ನು ನಾನು ಇಂದು ರಾತ್ರಿ ಪ್ರಕಟಿಸಬೇಕಾಗಿದೆ ನನಗೆ ನಿಮ್ಮ ಸಹಮತ ಬೇಕು ನನಗೆ * ಎಸ್ *ಬೇಕು *ನುೊ*ಬೇಡ ಎಂದರೂ ವಾಜಪೇಯಿ ಅವರು ಆಗ ನ್ಯಾಷನಲ್ ಡೆಮಾಕ್ರಟಿಕ್ ಅಲೈನ್ಸ್ (NDA) ಎಂಬ ಎರಡು ಚಿಟ್ಟ ಜನರಿಗೂ ಹೆಚ್ಚು ಭಾಗೀದಾರರ ಪಕ್ಷಿಗಳಿರುವ ರಾಜಕೀಯ ಮೈತ್ರಿಕೂಟದ ನಾಯಕರಾಗಿದ್ದರು ಅಂತಹ ಸನ್ನಿವೇಶದಲ್ಲಿ ಮೈತ್ರಿಕೂಟದ ಒಳಗೆ ಯಾವುದೇ ವಿಷಯದಲ್ಲಿ ಸಾಗುವನಿ ಸಾಧಿಸುವುದು ಸುಲಭವಾಗಿರಲಿಲ್ಲ.ಕೊಠಡಿಯನ್ನು ಹೊಕ್ಕು ಕುಳಿತುಕೊಳ್ಳುವುದಕ್ಕೂ ಅವಕಾಶವಾಗಿರಲಿಲ್ಲ ಭವಿಷ್ಯದ ಅನೇಕ ದೃಶ್ಯಗಳು ನನ್ನ ಕಣ್ಣ ಮುಂದೆ ಹಾದು ಹೋದವು ಸದಾ ಶಿಕ್ಷಕರಿಂದಲೂ ವಿದ್ಯಾರ್ಥಿಗಳಿಂದಲೂ ಸುತ್ತುವರಿದಿರುವ ದೃಶ್ಯ ಅವುಗಳಲ್ಲೊಂದು ಇನ್ನೊಂದರಲ್ಲಿ ನಾನು ದೇಶ ಭವಿಷ್ಯದ ಸ್ವರೂಪದ ಬಗ್ಗೆ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದೆ ತೀರ್ಮಾನವನ್ನು ರೂಪಿಸಿರುವ ಅಚ್ಚು ನನ್ನ ಮನದಲ್ಲಿ ತಿರುಗಾಡು ತೊಡಗಿತು ನಾನು ""ವಾಜಪೇಯಿ ಜಿ.. (ನಾನು ಅವರನ್ನು ಹಾಗೆ ಕರೆಯುತ್ತಿದ್ದೆ ) ಅಲ್ಲದೆ ನನಗೆ ತೀರ್ಮಾನಿಸಲು ಎರಡು ಗಂಟೆ ಕಾಲಾವಕಾಶ ಕೊಡುತ್ತೀರಾ ಅಲ್ಲದೆ ನನ್ನನ್ನು ರಾಷ್ಟ್ರಪತಿ ಅಭ್ಯರ್ಥಿ ಎಂದು ಸೋಗು ಸೂಚಿಸುವುದರಲ್ಲಿ ಎಲ್ಲ ರಾಜಕೀಯ ಪಕ್ಷಗಳ ಸಹಮತ ಇರುವುದು ಅಗತ್ಯ ""ಎಂದು ಹೇಳಿದೆ .
ಅದಕ್ಕೆ ವಾಜಪೇಯಿಯವರು ""ನೀವು ಒಪ್ಪಿದ ಮೇಲೆ ನಾವು ಸಹಮತವನ್ನು ರೂಪಿಸಲು ಕೆಲಸ ಮಾಡುತ್ತೇವೆ"" ಎಂದರು .
ಮುಂದಿನ ಎರಡು ತಾಸುಗಳಲ್ಲಿ ನಾನು ಸುಮಾರು ಮೂವತ್ತಕ್ಕೂ ಹೆಚ್ಚು ದೂರವಾಣಿ ಕಾರ್ಯಗಳನ್ನು ಮಾಡಿದೆ ಇವರಲ್ಲಿ ನನ್ನ ಪ್ರಾಧ್ಯಾಪಕ ಮಿತ್ರರು ಆಡಳಿತ ಸೇವೆಯಲ್ಲಿನ ಹಾಗೂ ರಾಜಕೀಯದಲ್ಲಿನ ಮಿತ್ರರು ಇದ್ದರೂ ನಾನು ಶೈಕ್ಷಣಿಕ ಜೀವನದಲ್ಲಿದ್ದ ಅಧ್ಯಾಪನದಲ್ಲಿ ಸಂತೋಷವಾಗಿದ್ದವನು.
2020ರ ಭಾರತ ಎಂಬ ಕನಸನ್ನು ದೇಶದ ಮುಂದೆ ಹಾಗೂ ಸಂಸತ್ತಿನ ಮುಂದೆ ಇರಿಸಲು ಇದು ಒಂದು ಉತ್ತಮ ಅವಕಾಶವಾಗಿದ್ದು ಅದನ್ನು ಕಳೆದುಕೊಳ್ಳಬಾರದು ಎಂಬುದು ಎರಡನೇ ಅಭಿಪ್ರಾಯವಾಗಿತ್ತು. ಸರಿಯಾಗಿ ಎರಡು ಗಂಟೆಗಳ ನಂತರ ನಾನು ಮತ್ತೆ ವಾಜಪೇಯಿ ಅವರ ಚಿತ್ರ ಮಾತನಾಡಿದೆ ವಾಜಪೇಯಿ ಜಿ ಇದನ್ನು ನಾನು ಒಂದು ಮಹತ್ವದ ಕಾರ್ಯವೆಂದು ಭಾವಿಸಿದ್ದೇನೆ ನಾನು ಸರ್ವಪಕ್ಷಗಳ ಅಭ್ಯರ್ಥಿಯಾಗಲು ಬಯಸಿದ್ದೇನೆ ಎಂದೆ.
ಅವರು ಉತ್ತರಿಸಿದರು : "ಸರಿ ಅದಕ್ಕಾಗಿ ನಾನು ಕೆಲಸ ಮಾಡುತ್ತೇವೆ .ಥ್ಯಾಂಕ್ಯೂ
ಈ ಸುದ್ದಿ ಬಹಳ ವೇಗವಾಗಿ ಹರಡಿತು ಹದಿನೈದು ನಿಮಿಷಗಳಲ್ಲಿ ರಾಷ್ಟ್ರಪತಿ ಅಭ್ಯರ್ಥಿಯಾಗಿ ನನ್ನ ಆಯ್ಕೆ ಸುದ್ದಿ ದೇಶಾದ್ಯಂತ ಹರಡಿತು ತಕ್ಷಣದಿಂದಲೇ ನನ್ನ ದೂರವಾಣಿಗಳು ನಿರಂತರವಾಗಿ ಬಡಿದುಕೊಳ್ಳಲು ತೊಡಗಿದವು .
ಅವುಗಳಿಗೆ ವಿರಾಮವೆಂಬುದೆ ..ಇರಲಿಲ್ಲ , ನನ್ನ ಭದ್ರತೆಯನ್ನು ಬಲ ಪಡಿಸಲಾಯಿತು .
ಜೊತೆಗೆ ನನ್ನ ಕೊಠಡಿಯಲ್ಲಿ ಅನೇಕ ಅನೇಕ ಜನರು ಬಂದು ಜಮಾಯಿಸಿದರು .
ಅದೇ ದಿನ ವಾಜಪೇಯಿಯವರು ವಿರೋಧ ಪಕ್ಷದ ನಾಯಕಿಯಾದ ಸೋನಿಯಾ ಗಾಂಧಿಯವರ ಜೊತೆ ರಾಷ್ಟ್ರಪತಿ ಅಭ್ಯರ್ಥಿ ವಿಷಯವನ್ನು ಚರ್ಚಿಸಿದರು .NDA ಕೂಟದ ಆಯ್ಕೆಯೂ ಅಂತಿಮವೇ ಎಂದು ಸೋನಿಯಾ ಗಾಂಧಿಯವರು ಕೇಳಿದಾಗ ವಾಜಪೇಯಿ ಅವರು "ಹೌದು" ಎಂದು ಉತ್ತರ ಕೊಟ್ಟರು.
ತಮ್ಮ ಪಕ್ಷದ ನಾಯಕರು ಹಾಗೂ ಭಾಗೀದಾರರ ಪಕ್ಷಗಳ ನಾಯಕರೊಂದಿಗೆ ಸಮಾಲೋಚನೆ ಮಾಡಿದ ಸೋನಿಯಾ ಗಾಂಧಿಯವರು ನನ್ನ ಉಮೇದುವಾರಿಕೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಬೆಂಬಲವನ್ನು ಅದೇ ತಿಂಗಳು ಅಂದರೆ 2002 ಜೂನ್ 17ರಂದು ಪ್ರಕಟಿಸಿದರು.
ನನ್ನ ಉಮೇದುವಾರಿಕೆಗೆ ಎರಡು ಪಕ್ಷಗಳ ಬೆಂಬಲವೂ ದೊರೆತಿದ್ದೇ ಚೆನ್ನಾಗಿತ್ತು ಆದರೆ ಅವರು ತಮ್ಮದೇ ಆದ ಅಭ್ಯರ್ಥಿಯನ್ನು ನಿಲ್ಲಿಸಲು ತೀರ್ಮಾನಿಸಿದರು . ನಾನು ರಾಷ್ಟ್ರಪತಿ ಅಭ್ಯರ್ಥಿಯಾಗಲು ಒಪ್ಪಿದ್ದೇ ತಡ ಈ ವಿಷಯವಾಗಿ ಅಪಾರ ಸಂಖ್ಯೆಯಲ್ಲಿ ಲೇಖನಗಳು ವಿಶ್ಲೇಷಣೆಗಳು ಮಾಧ್ಯಮಗಳಲ್ಲಿ ಬರಲು ತೊಡಗಿದವು. ಮಾಧ್ಯಮವು ಅನೇಕ ಪ್ರಶ್ನೆಗಳನ್ನು ಎತ್ತಿತು ರಾಜಕೀಯೇತರ ವ್ಯಕ್ತಿಯೊಬ್ಬ ಅದರಲ್ಲೂ ಒಬ್ಬ ವಿಜ್ಞಾನಿ ರಾಷ್ಟ್ರಪತಿ ಆಗುವುದು ಹೇಗೆ ಸಾಧ್ಯ ಎಂಬುದೇ ಇವೆಲ್ಲವುಗಳ ಸಾರವಾಗಿತ್ತು .
ನಾನು ರಾಷ್ಟ್ರಪತಿ ಸ್ಥಾನಕ್ಕೆ ಉಮೇದುವಾರಿಕೆಯ ನಾಮಪತ್ರವನ್ನು ಸಲ್ಲಿಸಿದ ಜೂನ್ದು 18 ನನ್ನ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಂದ ನನಗೆ ಮುಖ್ಯವಾಗಿ ಎರಡು ಪ್ರಶ್ನೆಗಳು ಎದುರಾದವು.
ಒಂದನೆಯದು ಗುಜರಾತಿನ ಸಮಸ್ಯೆ (ಆ ರಾಜ್ಯದಲ್ಲಿ ದಂಗೆಗಳ ನಡೆದಿದ್ದವು ಹಾಗೂ ಅವುಗಳನ್ನು ನಿಭಾಯಿಸಿದ ಬಗ್ಗೆ ಕುರಿತು ಪ್ರಶ್ನೆಗಳು ಆತಂಕಗಳು ಎತ್ತಿದ್ದವು ). ಅಯೋಧ್ಯೆ ಅದು ಎರಡನೇ ವಿಚಾರ (ರಾಮಜನ್ಮಭೂಮಿ ಪ್ರಶ್ನೆಯೂ ಸಹ ಸುದ್ದಿಯಲ್ಲಿತ್ತು ).
ಮೂರನೆಯದು ಪರಮಾಣು ಪರೀಕ್ಷೆ ನಂತರ ರಾಷ್ಟ್ರಪತಿ ಭವನಕ್ಕೆ ಹೋದ ಮೇಲೆ ನನ್ನ ಯೋಜನೆಗಳೇನು ಎಂಬುದು ಭಾರತಕ್ಕೆ ಒಂದು ವಿದ್ಯಾವಂತ ರಾಜಕೀಯ ವರ್ಗವು ಅಗತ್ಯ ಹಾಗೂ ಈ ಸಮುದಾಯವೂ ಕೈಗೊಳ್ಳುವ ತೀರ್ಮಾನಗಳಿಗೆ ಅನುಕಂಪವೇ ತಳಹದಿ ಆಗಿರಬೇಕು ಎಂದು ನಾನು ಹೇಳಿದೆ ಅಯೋಧ್ಯೆ ವಿಷಯ ಬಂದಾಗ ನಾನು ಈ ದೇಶಕ್ಕೆ ಶಿಕ್ಷಣವು ಆರ್ಥಿಕ ಅಭಿವೃದ್ಧಿಯು ಮಾನವ ಜೀವಿಗಳ ಕುರಿತಾದ ಗೌರವವೂ ಅಗತ್ಯವಿದೆ ಎಂದು ಹೇಳಿದೆ .ಆರ್ಥಿಕ ಅಭಿವೃದ್ಧಿಯ ದೆಸೆಯಿಂದ ಸಾಮಾಜಿಕ ಅಂತರಗಳು ಕಡಿಮೆಯಾಗುತ್ತವೆ ರಾಷ್ಟ್ರಪತಿ ಭವನದ ವೈಭವ ಘನತೆ ಗಾಂಭೀರ್ಯಗಳ ನಡುವೆ ನಾನು ಸರಳತೆಯನ್ನು ಆಚರಿಸುವುದಕ್ಕಾಗಿ ತಿಳಿಸಿದೆ ರಾಷ್ಟ್ರಪತಿಯಾಗಿ ನಾನು ಸಂಕೀರ್ಣವಾದ ಯಾವುದೇ ವಿಚಾರ ಮುಂದೆ ಬಂದಾಗ ದೇಶದ ಪ್ರಮುಖ ಸಂವಿಧಾನ ತಜ್ಞರ ಸಲಹೆ ಪಡೆಯುವುದಕ್ಕಾಗಿ ತಿಳಿಸಿದೆ .ರಾಜ್ಯಗಳ ಮೇಲಿನ ರಾಷ್ಟ್ರಪತಿ ಆಲಿಕೆ ಮುಂತಾದ ವಿಷಯಗಳಲ್ಲಿ ಕೆಲವೇ ಜನರಿಗೆ ಏನು ಬೇಕು ಎಂಬುದಕ್ಕಿಂತ ಜನರಿಗೆ ಅಂದರೆ ಪ್ರಜೆಗಳಿಗೆ ಏನು ಬೇಕೋ ಅದನ್ನು ಆಯ್ಕೆ ಮಾಡುವುದಕ್ಕಾಗಿ ತಿಳಿಸಿದೆ .
ನಾನು ಚೆನ್ನೈಯಿಂದ ದೆಹಲಿಯ ಏಷ್ಯಾಡ್ ಗ್ರಾಮದ ನನ್ನ ಫ್ಲ್ಯಾಟ್ಗೆ ಜುಲೈ ಹತ್ತು ರಂದು ಬಂದಾಗ ಸಿದ್ಧತೆಗಳು ಭರದಿಂದ ನಡೆದಿದ್ದವು . ಭಾರತೀಯ ಜನತಾ ಪಕ್ಷದ ಪ್ರಮೋದ್ ಮಹಾಜನ್ ನನ್ನ ಚುನಾವಣಾ ಏಜೆಂಟ್ ಆಗಿದ್ದರು ಫ್ಲ್ಯಾಟ್ ನಲ್ಲಿ ನಾನು ಚುನಾವಣೆಯ ಕಚೇರಿಯನ್ನು ತೆರೆದರೆ ಅದು ದೊಡ್ಡದಾದ ಫ್ಲ್ಯಾಟ್ ಏನೂ ಆಗಿರಲಿಲ್ಲವಾದರೂ ಅದರಲ್ಲಿ ಸಾಕಷ್ಟು ಸ್ಥಳವಿತ್ತು ಬೇಕಂತೆ ಹೊಂದಿಕೊಳ್ಳಲು ಅನುಕೂಲಗಳಿದ್ದುವು.
ಅಲ್ಲಿ ಒಂದು ಸಂದರ್ಶಕರ ಕೊಠಡಿ ಸಿದ್ಧಪಡಿಸಲಾಯಿತು ಸಭಾ ಕೊಠಡಿಯನ್ನು ತ್ತಾರೋ ತಯಾರು ಮಾಡಲಾಯಿತು ಆಮೇಲೆ ವಿದ್ಯಾತ್ಮ ಕ್ಯಾಂಪ್ ಕಚೇರಿಯನ್ನು ತೆರೆಯಲಾಯಿತು ಆ ನಂತರ ಎಲ್ಲ ಮಾಹಿತಿಗಳು ವಿದ್ಯಾತ್ಮ ಮಾಧ್ಯಮದಲ್ಲಿ ಹೋಗಿ ಬರತೊಡಗಿದವು .
ಲೋಕಸಭೆ ಹಾಗೂ ರಾಜ್ಯಸಭೆಯ ಸುಮಾರು 800 ಮಂದಿ ಸದಸ್ಯರಿಗೆ ರಾಷ್ಟ್ರಪತಿಯಾಗಿ ನನ್ನ ಕಲ್ಪನೆ ಕಾಣಿಕೆಗಳು ಎಂದು ವಿವರಿಸಿ ಅವರ ಮತವನ್ನು ಯಾಚಿಸಿ ಪತ್ರವನ್ನು ಸಿದ್ಧಪಡಿಸಲಾಯಿತು ರಾಷ್ಟ್ರಪತಿ ಚುನಾವಣೆಯ ಮತ ಕ್ಷೇತ್ರದ ಪ್ರತಿಯೊಬ್ಬ ಸದಸ್ಯರನ್ನು ವೈಯಕ್ತಿಕವಾಗಿ ಭೇಟಿ ಮಾಡದೆ ಈ ರೀತಿ ಪ್ರಚಾರವನ್ನು , ಕೋರಿಕೆಯನ್ನು ಕೇಳಿಸಬಹುದು ಎಂದು ಪ್ರಮೋದ್ ಮಹಾಜನ್ ಅವರ ಅಭಿಪ್ರಾಯದ ಅನುಸಾರ ಹೀಗೆ ಮಾಡಿದೆವು .
ಜುಲೈ18 ರಂದು ನಾನು ಅತ್ಯುತ್ತಮ ಬಹುಮತದೊಂದಿಗೆ ಚುನಾಯಿತರಾಗಿರುವ ವೆಂದು ಘೋಷಿಸಲಾಯಿತು .
ಏಷ್ಯಾಡ್ ಗ್ರಾಮದ 833ನೇ ಫ್ಲಾಟ್ ಚಟುವಟಿಕೆಯಿಂದ ತುಂಬಿದ ಜೇನು ಗಂಡಿನಂತೆಯೇ ಆಯಿತು . ಜುಲೈ 25ರ ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿತರ ಪಟ್ಟಿಯನ್ನು ಸಿದ್ಧಪಡಿಸುವುದೇ ಒಂದು ತೊಟ್ಟ ಕೆಲಸವಾಗಿತ್ತು ಸಂಸತ್ತಿನ ಕೇಂದ್ರ ಸಭಾಭವನದಲ್ಲಿ ಒಂದು ಸಾವಿರ ಜನರಿಗಷ್ಟೇ ಸ್ಥಳಾವಕಾಶ .ಸಂಸತ್ ಸದಸ್ಯರು ಎರಡೂ ಸದನಗಳ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ , ಗೃಹ ಮತ್ತು ಇತರೆ ಸಚಿವಾಲಯಗಳ ಅಧಿಕಾರಿಗಳು ಹಾಗೂ ನಿರ್ಗಮಿಸುವ ರಾಷ್ಟ್ರಪತಿಗಳಾದ ಕೆ .ಆರ್ . ನಾರಾಯಣ್ ಅವರ ಅತಿಥಿಗಳು ಇಷ್ಟು ಮಂದಿ ಆದ ಮೇಲೆ ಇವರು ಅವಕಾಶ 100 ಮಂದಿಗೆ ಮಾತ್ರ . ಇದನ್ನು 150ರ ವರೆಗೂ ವಿಸ್ತರಿಸಲಾಯಿತು . ಈ ನೂರೈವತ್ತು ರಲ್ಲಿ ಯಾರನ್ನೆಲ್ಲ ಸೇರಿಸಬೇಕು ಎಂಬುದು ಒಂದು ಸಮಸ್ಯೆಯಾಯ್ತು ಅತಿಥಿಗಳಾಗಿ ಬರುವ ಕುಟುಂಬ ಸದಸ್ಯರೆ 37 ಮಂದಿ . ನನ್ನ ಹಳೆಯ Physics ಉಪನ್ಯಾಸಕರಾದ ಪ್ರೊಫೆಸರ್ ¦¦ ಚಿನ್ನದೊರೈ ಮದ್ರಾಸ್ ಇನ್ಸಟೂಶನ್ ಆಫ್ ಟೆಕ್ನಾಲಜಿ. ಪ್ರೊಫೆಸರ್ ಕೆ. ವಿ ಪಂದಳೈ , ರಾಮೇಶ್ವರಂ ಮಸೀದಿಯ ಇಮಾಮ್ ನೂರುಲ್ ಖುದಾ . ರಾಮೇಶ್ವರ್ ಇಗರ್ಜಿಯ ಧರ್ಮಗುರುಗಳಾದ ರೆ .ಎ.ಜಿ ಲಿಯೊನಾರ್ಡ್ . ರಾಮೇಶ್ವರ ದೇವಸ್ಥಾನದ ಮುಖ್ಯ ಅರ್ಚಕರಾದ ಪಕ್ಷಿ ವೆಂಕಟ ಸುಬ್ರಹ್ಮಣ್ಯ ಶಾಸ್ತ್ರಿೣಗಳೆೆ.
ಅರವಿಂದ್ Eye ಇನ್ಸ್ಟ್ಯೂಟ್ ಪ್ರಾರಂಭಿಸಿದ ಪ್ರಖ್ಯಾತ ಕಣ್ಣಿನ ರೋಗ ತಜ್ಞರಾದ ಡಾ. ಜಿ. ವೆಂಕಟ ಸ್ವಾಮಿ ಇವರನ್ನೆಲ್ಲ ಕರೆಯಬೇಕಾಗಿತ್ತು . ಭರತನಾಟ್ಯ ಪ್ರವೀಣೆ ಸೋನಾಲ್ ಮಾನ್ಸಿಂಗ್ ಅನೇಕ ಉದ್ಯಮಿಗಳು ಪತ್ರಕರ್ತರು ಖಾಸಗಿ ಸ್ನೇಹಿತರು ಇವರೆಲ್ಲ ಇದ್ದರು . ಎಲ್ಲ ರಾಜ್ಯಗಳಿಂದ ಆಯ್ಕೆ ಮಾಡಿದ 100 ಮಂದಿ ಮಕ್ಕಳ ಒಂದು ಗುಂಪು ಈ ಪಟ್ಟಿಯಲ್ಲಿದ್ದು ವಿಶೇಷ ಅಂಶವಾಗಿತ್ತು ಆ ಮಕ್ಕಳಿಗೆ ಸಭಾಭವನದಲ್ಲಿ ಪ್ರತ್ಯೇಕ ಸ್ಥಳ ಏರ್ಪಡಿಸಲಾಗಿತ್ತು .
ಸ್ನೇಹಿತರ ಮುಂದೆ ವಾಜಪೇಯಿ ಅವರು ಕಲಾಂ ಅವರಿಗೆ ಏನು ಹೇಳಿದರು ,ಆ ಮುಖ್ಯ ವಿಚಾರವೇನು ಇದನ್ನೆಲ್ಲ , ಮುಕ್ತ ವಿಚಾರಗಳನ್ನು ನಿಮ್ಮ ಮುಂದೆ ಇಡಲು ಇಚ್ಛಿಸುತ್ತಿದ್ದೇನೆ ..
ಈ ನನ್ನ ಟಿಪ್ಪಣಿಯನ್ನು ಓದಿ ಹಾಗೂ ನನ್ನ ಈ ಬ್ಲಾಗರ್ ಪೇಜ್ ಅನ್ನು ಲೈಕ್ ಅಂಡ್ ಶೇರ್ ಮಾಡಿ .. ಮುಂದಿನ ಸಂಚಿಕೆಯನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು.
ವಂದನೆಗಳೊಂದಿಗೆ
ಸಯ್ಯದ್ ಹುಸೇನ್ B.E ,M.B.A
Comments
Post a Comment